ವೈದ್ಯನ ನಿಜ ವೇಷ

0ದಿನಬೆಳಗ್ಗೆ ಗುಣವಾಗಲೆಂದು ದೇವರಲ್ಲಿ ಹೋಗುವರು ಮೊರೆ

ಆದರು ಕರುಣೆ ತೋರದೆ ಕುಳಿತಿರುವನು ಆ ದೊರೆ

ಒಂದು ಕೋಣೆಯಲ್ಲಿ ಜನನದ ಸಂತಸ

ಇನೊಂದು ಕೋಣೆಯಲ್ಲಿ ಸಾವಿನ ಸಂತಾಪ

ತಾಯಿ ಹೆರಿಗೆಯ ನಂತರ ಮಗುವನ್ನು ಕಂಡು

ಮುಗುಳುನಗೆ ಬೀರಿ ತೊರುವಳು ನೋವಲೊಂದು ಸಂತಸ…

ಅಪಘಾತದಲ್ಲಿ ಹೋಗಬೇಕಾದ ಜೀವ ಉಳಿದರು ದೇಹದ ಅಂಗ ಉಳಿದಿಲ್ಲ

ಇದರಲ್ಲಿ ಕಾಣಬಹುದು ಸಂತಸದಲೊಂದು ನೋವು…

 

ಕೆಲವೊಮ್ಮೆ ಕೊಣೆಯಿಂದ ದೇಹ ಹೊರಬರುತ್ತದೆ

ಆದರೆ ಜೀವ ಬಾರದ ಲೋಕಕ್ಕೆ ಹೋಗಿರುತ್ತದೆ

ಆಸ್ಪತ್ರೆಯಲ್ಲಿ ಆಸರೆಗೆ ಆಲಿಸಬೇಕಾದ ಮನಸ್ಸುಗಳು ಕಡಿಮೆ

ಸಣ್ಣಪುಟ್ಟ ಕೆಲಸಗಳಿಗೆ ಹಣ ಕೇಳಿ ಹೇಳುವರು ಇದೇ ನಮ್ಮ ದುಡಿಮೆ

 

 

ಮಲಗುವ ಮಂಚಕ್ಕು ಇಲ್ಲಿದೆ ಬೆಲೆ

ಸಾವನ್ನು ಮುಂದಿಟ್ಟು ಬೀಸುವರು ಬಲೆ

ಬೀಸಿದ ಬಲೆಯಿಂದ ಉಳಿಸಿಕೊ ನಿನ್ನ ನೆಲೆ

ಇಲ್ಲವಾದಲ್ಲಿ ಸದ್ದಿಲ್ಲದೆ ನಡೆದುಹೋಗುತ್ತೆ ಒಂದು ಕೊಲೆ

ಬಡವರ ನೋವು ಕೇಳುವರಿಲ್ಲ

ಶ್ರೀಮಂತರ ಹಣದ ಮುಂದೆ ನಡೆಯುವುದೆಲ್ಲ

ಹಣ ಕೊಟ್ಟು ತಲೆಬಾಗುವರು ರೋಗಿಗಳೆಲ್ಲ

ಕೊನೆಗೆ ವೈದ್ಯರು ಹೇಳುವರು ನಮ್ಮ ಕೈಲಿ ಏನು ಇಲ್ಲ

ದೇವರಿಗಿಂತ ಹೆಚ್ಚಾಗಿ ನಂಬುವುದು ವೈದ್ಯರನ್ನು

ವೈದ್ಯನ ಕೈ ಚಳಕದಲ್ಲಿ ನೋಡಬಹುದು ಅವನ ಕಲೆಯನ್ನು

ಕಲೆಗೆ ಬೆಲೆಕಟ್ಟಿ ಕೊಡುವರು ಹಣವನ್ನು

ಹಣ-ಗುಣಗಳ ನಡುವೆ ಮರೆತುಹೋದರು ಋಣವನ್ನು

 

 

ವೈದ್ಯನು ತನ್ನ ನಿಜವಾದ ಅರ್ಥ ಕಳೆದುಕೊಂಡಿದ್ದಾನೆ

ಸಾವಿನ ಭಯಕ್ಕೆ ರೋಗಿಯು ಮೌನವಾಗಿದ್ದಾನೆ

ಲಂಚದ ಆಸೆಗೆ ಬಲಿಯಾಗುತ್ತಿವೆ ನೂರಾರು ಜೀವಿಗಳು ಇಂದು

ಈ ಲಂಚಕ್ಕೆ ಇತಿ ಹಾಡಿದರೆ ಎಲ್ಲರ ಮೊಗದಲ್ಲಿ ಕಾಣಬಹುದು ನಗುವೊಂದು

– ಕೃಷ್ಣಮೂರ್ತಿ. ಕೆ.

Categories PoemsTags , ,

2 thoughts on “ವೈದ್ಯನ ನಿಜ ವೇಷ

  1. Excellent keep it up

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

search previous next tag category expand menu location phone mail time cart zoom edit close