ಕಾಟನ್ ಕ್ಯಾಂಡಿ ಮತ್ತು ನೆನಪುಗಳು

ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಟ್ರಾಫಿಕ್ ಜಾಮ್ ಎಂದರೆ ಎಲ್ಲರಿಗೂ ಕಿರಿಕಿರಿ. ಟ್ರಾಫಿಕ್ ಜಾಮ್ ಅಂತ ಹೆಸರು ಕೇಳುವುದರಲ್ಲೇ ಅಷ್ಟು ಕಿರಿಕಿರಿ ಅಂದರೆ ಇನ್ನು ಅನುಭವಿಸುವುದರಲ್ಲಿ ಎಷ್ಟು ಕಿರಿಕಿರಿ ಇರುವುದಿಲ್ಲ ನೀವೆ ಊಹಿಸಿ.
ಯಾಕೆ ಈ ಟ್ರಾಫಿಕ್ ಜಾಮ್ ಬಗ್ಗೆ ಮಾತನಾಡುತ್ತಿದ್ದೇನೆ ಅಂತ ಯೋಚಿಸ್ತಿದ್ದೀರ?
ಹಾ, ಅಲ್ಲೇ ಇರೋದು ನನ್ನ ಈ ಪುಟ್ಟ ಕಥೆ.
ಸುಮಾರು ಹತ್ತು ವರ್ಷಗಳಿಂದ ನಾನು ವಾಹನ ಚಾಲನೆ ಮಾಡುತ್ತಿದ್ದೇನೆ ಆದರೆ ಟ್ರಾಫಿಕ್ ಜಾಮ್ ನೋಡಿ ನೋಡಿ ಬೇಸತ್ತು ಮನಸ್ಸು ಕೂಡ ಅದಕ್ಕೆ ಹೊಂದಿಕೊಂಡಿತ್ತು. ಯಾವಾಗಲು ಅಯ್ಯೋ ಅನ್ನುವ ಈ ಟ್ರಾಫಿಕ್ ಜಾಮ್ ನಲ್ಲಿ ಅದೊಂದು ದಿನ ನನ್ನ ಮುಖದಲ್ಲಿ ಮುಗುಳುನಗೆ ಬೀರಿತ್ತು. ಯಾಕೆ ಅಂತ ಕೇಳ್ತೀರಾ?
ಆ ದಿನ ನಾನು ಕಸ್ತೂರಬಾ ರಸ್ತೆ ಮಾರ್ಗವಾಗಿ ಎಂ. ಜಿ. ರಸ್ತೆಯ ಮುಖಾಂತರ ಹಲಸೂರು ತಲುಪಬೇಕಿತ್ತು. ಕಸ್ತೂರಬಾ ರಸ್ತೆಯಲ್ಲಿ ಸಿಗ್ನಲ್ ನಲ್ಲಿ ಎಷ್ಟು ಜಾಮ್ ಇರುತ್ತೆ ಅಂತ ನಿಮಗೆ ತಿಳಿದಿರುತ್ತದೆ. ಆ ಸಿಗ್ನಲ್ ನಲ್ಲಿ ಒಬ್ಬ ವ್ಯಕ್ತಿ “ಕಾಟನ್ ಕ್ಯಾಂಡಿ” ಮಾರುವುದನ್ನು ನಾನು ಬಹಳ ಸಲ ನೋಡಿದ್ದೆನೆ. ಎರಡು ನಿಮಿಷಗಳ ಕಾಲ ಸಿಗ್ನಲ್ ನಲ್ಲಿ ನಿಲ್ಲಬೇಕ್ಕಿತ್ತು ನನ್ನ ಮುಂದಿನ ಕಾರಿನವರು “ಕಾಟನ್ ಕ್ಯಾಂಡಿ” ಕೊಳ್ಳುತ್ತಿರುವುದನ್ನು ನೋಡಿ ನನಗೆ ನನ್ನ ಗೆಳತಿ ನೆನಪಿಗೆ ಬಂದಳು. ಯಾರು ಆ ಗೆಳತಿ ಅಂತ ದಯವಿಟ್ಟು ಕೇಳಬೇಡಿ. ಆ ಎರಡು ನಿಮಿಷಗಳ ಸಿಗ್ನಲ್ ನಲ್ಲಿ ನನ್ನ ಕಾಲೇಜಿನ ದಿನಗಳಿಗೆ ನೆನಪುಗಳು ಕೊಂಡ್ಯೊದವು.
ಆ ದಿನ ನನ್ನ ಕಾಲೇಜಿನಲ್ಲಿ “ಕನ್ನಡ ಸಂಘದ ಸಮಾರೋಪ ಸಮಾರಂಭ” ನಡೆಯುತ್ತಿದೆ. ಅದರಲ್ಲಿ ನಾನು ನನ್ನ ಸ್ನೇಹಿತರು ಸೇರಿ ಸ್ವಯಂವರ ಎಂಬ ಪರಿಕಲ್ಪನೆಯಲ್ಲಿ ಒಂದು ಅಣಕು ಪ್ರದರ್ಶನ ಮಾಡಬೇಕಿತ್ತು. ಬೆಳಗಿನ ಜಾವ ಇನ್ನು ಮುಂಜಾನೆಯ ಮಂಜು ಸರಿದಿರಲಿಲ್ಲ ಆಗಲೇ ಕಾಲೇಜಿಗೆ ಬಂದು ಕಾರ್ಯಕ್ರಮದ ಸಿದ್ಧತೆ ನಡೆಸುತ್ತಿದೆವು ಹಾಗು ಆ ಕಾರ್ಯಕ್ರಮದಲ್ಲಿ ನಮ್ಮ ಅಣಕು ಪ್ರದರ್ಶನ ಬಹಳ ಅತ್ಯುತ್ತಮವಾಗಿ ಮೂಡಿಬಂತು, ಇದಕ್ಕೆ ನನ್ನ ತಂಡ ಶ್ರಮ ಬಹಳಷ್ಟಿದೆ. ಒಂದು ಮೂಲೆಯಲ್ಲಿ ನಿಂತಿದ್ದ ನನ್ನ ಗೆಳತಿಯ ಮುಖದಲ್ಲಿ ನಗುವನ್ನು ನೋಡಿ ಬಹಳ ಖುಷಿಯಾಯಿತು ಮತ್ತು ಅವಳ ಸಹಾಯವು ಕೂಡ ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಮುಖ್ಯ ಕಾರಣವಾಗಿತ್ತು.
ಕಾರ್ಯಕ್ರಮ ಮುಗಿದ ನಂತರ ನಮ್ಮ ಕಾಲೇಜಿನ ಪಕ್ಕದಲ್ಲಿದ್ದ ಗಣೇಶ ಕ್ಯಾಂಟೀನ್ ಗೆ ಊಟ ಮಾಡಲೆಂದು ಹೊರಟೆವು. ಆಗ ನನ್ನ ಗೆಳೆತಿ ಕೂಡ ನನ್ನ ಕೈ ಹಿಡಿದು ನಡೆದು ಬಂದಳು. ನನಗೆ ಎಲ್ಲಿಲ್ಲದ ಖುಷಿ ಏಕೆಂದರೆ ಅವಳ ಜೊತೆ ಮಾತನಾಡಿ ಸುಮಾರು ಎರಡು ವಾರಗಳ ಮೇಲೆ ಆಗಿತ್ತು. ಸಣ್ಣ ಪುಟ್ಟ ವಿಷಯಗಳಿಗೆ ಕೋಪ ಮಾಡಿಕೊಳ್ಳುವುದು ಹುಡುಗಿಯರ ಹುಟ್ಟು ಗುಣ ಅಲ್ಲವೆ?.
ಗಣೇಶ್ ಕ್ಯಾಂಟೀನ್ ಗೆ ಬಂದು ಎಲ್ಲರು ಅವರಿಗಿಷ್ಟವಾದ ತಿಂಡಿಗಳನ್ನು ಆರ್ಡರ್ ಮಾಡಿ ಕಾಯುತ್ತಿದ್ದೆವು. ಇನ್ನೂಂದು ಕಡೆ ನನ್ನ ಗೆಳತಿಯ ಮುಖದಲ್ಲಿ ಏನೋ ಒಂದು ರೀತಿಯ ಸಂತೋಷ, ಯಾಕೆಂದು ನಾನು ಕೇಳಲಿಲ್ಲ. ತಟ್ಟೆಯಲ್ಲಿದ್ದ ಪುಲಾವ್ ಅವಳಿಗಾಗಿ ಕಾಯುತ್ತಿತ್ತು, ಅವಳು ನನಗೆ ಬೇಡ ಎಂದು ಹೇಳುತ್ತಿದ್ದಂತೆ ಅಲ್ಲಿ ನೋಡು ಲೈಟು, ಅಲ್ಲಿ ನೋಡು ಫ್ಯಾನ್ ಎಂದು ನೆಪ ಮಾಡಿ ಚಂದಮಾಮನನ್ನು ತೋರಿಸಿ ತಿನ್ನಿಸುವಂತೆ ಊಟ ಮಾಡಿಸುತ್ತಿದ್ದೆ. ಈ ಕಡೆ ನನ್ನ ಗೆಳೆಯನೊಬ್ಬ ನೋಡು ಗುರು ಅಪ್ಪ ಅಮ್ಮನಿಗು ಯಾವತ್ತು ಹೀಗೆ ಊಟ ಮಾಡಿಸಿಲ್ಲ ಆದರೆ ನಿನ್ನ ಗೆಳತಿಗೆ ಮಾತ್ರ ಹಿಂಗಾ ಎಂದು ಗೇಲಿ ಮಾಡುತ್ತಿದ್ದ. ಅವನಿಗೆ ಉತ್ತರ ನಂತರ ಕೊಡೋಣ ಅನ್ನುವಷ್ಟರಲ್ಲೇ ಅವನಾಗಲೆ ನನ್ನ ಪರಿಸ್ಥಿತಿ ಅರ್ಥಮಾಡಿಕೊಂಡು ತುಸು ನಗೆ ಬೀರಿ ಹೊರಟು ಹೋದ. ಇನ್ನೂಂದು ಕಡೆ ನನ್ನ ಗೆಳತಿಗೆ ತುತ್ತು ತಿನಿಸುವಾಗ ಅವಳ ಕಣ್ತುಂಬಿತ್ತು. ಗಾಬರಿಗೊಂಡ ನಾನು ಯಾಕೆ ಏನಾಯಿತು ಅಂತ ಎಷ್ಟು ಬಾರಿ ಕೇಳಿದರು ನನಗೆ ಇನ್ನೂ ಉತ್ತರ ದೊರಕಿಲ್ಲ.
ನಂತರ ನನ್ನ ಕಾರ್ ನಲ್ಲಿ ಅವಳನ್ನು ಸುರಕ್ಷಿತವಾಗಿ ಮನೆಗೆ ಬಿಡಬೇಕೆಂದು ನಿರ್ಧರಿಸಿ ಹೋಗೋಣ ಎಂದಾಗ ನನ್ನ ದುರಾದೃಷ್ಟಕ್ಕೆ ಅವಳ ಜೊತೆ ಎಲ್ಲರು ಬಂದು ಕಾರಿನಲ್ಲಿ ಕುಳಿತು ಬಸ್ ಸ್ಟಾಪ್ ವರೆಗು ಡ್ರಾಪ್ ಹಾಕು ಗುರು ಎಂದು ಗೋಳಿಟ್ಟರು‌. ಸರಿ ಆಗಲಿ ಎಂದು ಎಲ್ಲರನ್ನು ಬಸ್ ಸ್ಟಾಪ್ ವರೆಗು ಬಿಟ್ಟು ನಾನು ನನ್ನ ಗೆಳತಿ ಮತ್ತು ನನ್ನ ಗೆಳೆಯ ಮತ್ತು ಅವನ ಗೆಳತಿ ಒಟ್ಟು ನಾಲ್ಕು ಜನ ಮನೆಯ ಹಾದಿ ಹಿಡಿದೆವು. ಎಲ್ಲರ ಮನೆ ಒಂದೇ ಹಾದಿಯಲ್ಲಿ ಇದ್ದದ್ದು ನನಗೆ ಸುಲಭವಾಯಿತು. ಅಂದು ಕಸ್ತೂರಬಾ ರಸ್ತೆ, ಎಂ. ಜಿ. ರಸ್ತೆಯ ಮುಖಾಂತರ ಬೈಯಪ್ಪನಹಳ್ಳಿ ಮಾರ್ಗವಾಗಿ ಹಾದು ಹೋಗಿ ಅವರ ಮನೆಗೆ ಬಿಡಬೇಕಿತ್ತು. ಆಗ ಅದೇ ಕಸ್ತೂರಬಾ ಸಿಗ್ನಲ್ ನಲ್ಲಿ ಅದೇ ವ್ಯಕ್ತಿ ಕಾಟನ್ ಕ್ಯಾಂಡಿ ಹಿಡಿದು ನನ್ನ ಕಾರ್ ಬಳಿ ಬಂದು ಸರ್ ತಗೊಳಿ ಎಂದು ಹಿಂಸೆ ಕೊಡುತ್ತಿದ್ದ. ಈ ಕಡೆ ನನ್ನ ಗೆಳತಿ ಕಾಟನ್ ಕ್ಯಾಂಡಿ ಬೇಕೆ ಬೇಕು ಎಂದು ಹಿಂಸೆ ಕೊಡಲಾರಂಬಿಸಿದಳು. ಆ ಹಿಂಸೆಯಲ್ಲು ಏನೋ ಒಂದು ರೀತಿಯ ಖುಷಿ. ನಾನು ಸಪ್ಪೆ ಮುಖ ಮಾಡಿ ಕಾಟನ್ ಕ್ಯಾಂಡಿ ಅವಳಿಗೆ ಕೊಡಿಸಿದೆ ಅದನ್ನು ನೋಡಿ ಅವನು ಒಂದು ನಗೆ ನಕ್ಕಿ ಹೊರಟು ಹೋದ. ಅವನ ಆ ನಗು ಮತ್ತು ಸ್ವಲ್ಪ ಹೊತ್ತಿನ ಮುಂಚೆ ಆಕೆಯ ಅಳು ಎರಡರ ಉತ್ತರ ನನಗೆ ಇನ್ನೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.
ಹೀಗೆ ಖುಷಿಯಿಂದ ಮನೆಯ ಕಡೆಗೆ ಕಾರು ಚಲಾಯಿಸುತ್ತಾ ಹೊರಟ್ಟಿದ್ದೆ. ಹಾದಿಯ ಮಧ್ಯದಲ್ಲಿ ಆಕೆಗೆ ಅದೇನಾಯಿತೋ ತಿಳಿಯಲಿಲ್ಲ ಇದ್ದಕ್ಕಿದ್ದಂತೆ ಎಲ್ಲರು ಈಗ ತಪ್ಪೂಪಿಗೆಯ ಆಟ ಆಡೋಣ ಎಂದಳು. ಓ ಹೋ ಈಗ ನನ್ನನ್ನು ಯಾವುದೋ ಪ್ರಶ್ನೆಯಲ್ಲಿ ಸಿಲುಕಿಸಿ ನನ್ನಿಂದ ಉತ್ತರ ಪಡೆಯಬೇಕೆಂಬುದು ಇವಳ ಇಚ್ಚೆಯಾಗಿದೆ ಎಂದು ತಲೆ ಚುಚ್ಚಿಕೊಂಡು ಸರಿ ಆಗಲಿ ಎಂದೆ. ತಕ್ಷಣ ಆಕೆ ಯಾಕೆ ಇಷ್ಟು ದಿನ ಮಾತಾಡಿಸಲಿಲ್ಲ, ನನ್ನ ತಪ್ಪು ಏನಿತ್ತು, ನೀನು ನನ್ನನು ಇಷ್ಟ ಪಡಲು ಕಾರಣವೇನು ಎಂದು ಇನ್ನೂಂದು ರೀತಿಯಲ್ಲಿ ಪ್ರಶ್ನಿಸುತ್ತಾ ಹೋದಳು. ಇನ್ನೊಂದು ಕಡೆ ನಾನು ಅಯ್ಯೋ ದೇವರೇ ಇಷ್ಟು ಹೊತ್ತು ಖುಷಿಯಾಗಿಟ್ಟು ಈಗ ಯಾಕಪ್ಪಾ ತಗಲಾಕುತ್ತಿದ್ದೀಯ ಎಂದು ಮನಸ್ಸಿನಲ್ಲೇ ಹೇಳಿಕೊಂಡು ಆಕೆಯ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋದಂತೆ ಆಕೆಯ ಮನೆ ಬಂದೇ ಬಿಟ್ಟಿತು. ಆಕೆಯನ್ನು ಬೀಳ್ಕೊಡುವ ಸಮಯದಲ್ಲಿ ಮನಸ್ಸಿಗೆ ಕೊಂಚ ಬೇಸರವಾಯಿತು ಆದರು ಮತ್ತೆ ಇಂತಹ ದಿನಗಳು ಬರಲಿ ಎಂದು ಕೇಳಿಕೊಳ್ಳುತ್ತಾ ಆಕೆಯನ್ನು ಖುಷಿಯಿಂದ ಬೀಳ್ಕೊಟ್ಟು ಕಾರಿನಲ್ಲಿ ಕುಳಿತು ಸ್ವಲ್ಪ ಹೊತ್ತು ಮೌನವಾದೆ.
ನನ್ನ ಸ್ನೇಹಿತರು ನನ್ನ ಸ್ಥಿತಿ ನೋಡಿ ಬೇಸರಗೊಂಡರು. ಏಕೆಂದರೆ ಅವಳು ಒಂದು ದಿನ ಖುಷಿಯಿಂದ ಇದ್ದರೆ ಇನ್ನು ಹತ್ತು ದಿನ ಸುಮ್ಮನೆ ಕೋಪಿಸಿಕೊಂಡು ಮಾತು ಬಿಡುತ್ತಿದ್ದಳು.
ಹೀಗಿರುವಾಗ ನನ್ನ ಸ್ನೇಹಿತರನ್ನು ಮನೆಗೆ ಬಿಡುವ ಜವಾಬ್ದಾರಿ ನನ್ನ ಮೇಲಿತ್ತು. ಅವರನ್ನು ಮನೆಗೆ ಬಿಟ್ಟು ನಾನೂ ಮನೆಗೆ ಬಂದೆ. ನನ್ನ ಜೀವನದಲ್ಲಿ ಆ ದಿನ ಬಹಳ ಅಮೋಘವಾದ ದಿನ ಮತ್ತೆ ಅಂತಹದ ದಿನ ಬರಲೆಂದು ಭಾವಿಸಿದ್ದೆ, ಈಗಲೂ ಕೂಡ ಕಾಯುತ್ತಿರುವೆ ಆದರೆ ಇನ್ನೂ ಆ ದಿನ ಬರಲಿಲ್ಲ ಎಂಬ ಬೇಸರ ಮತ್ತು ಕೊರಗು ಕಾಡುತ್ತಿದೆ. ಕಾರಣಾಂತರಗಳಿಂದ ಒಂದು ಮಾತು ಇಲ್ಲದೆ ಬೇರೆಯಾಗಿರುವ ನಾವು ಮುಂದೊಂದು ದಿನ ಒಂದಾಗುತ್ತೇವೆ ಎನ್ನುವ ನಂಬಿಕೆಯಿಂದ ಕಾಯುತ್ತಿರುವೆ. ಈ ಕಡೆ ಸಿಗ್ನಲ್ ನಲ್ಲಿ ಜನರು ಶಬ್ದ ಮಾಡುತ್ತಿದ್ದು ಕಿವಿಗೆ ಬಿತ್ತು ಹಿಂದೆ ತಿರುಗಿ ನೋಡಿದರೆ ಜನರು ನನ್ನ ವಾಹನ ಮುಂದೆ ಹೋಗಬೇಕೆಂದು ಕಾಯುತ್ತಿರುವುದು ಅರಿವಾಯಿತು.
ಎರಡು ನಿಮಿಷಗಳ ಕಾಲದಲ್ಲಿ ಒಬ್ಬ ಕಾಟನ್ ಕ್ಯಾಂಡಿ ಹಿಡಿದು ನಿಂತ ವ್ಯಕ್ತಿಯನ್ನು ನೋಡಿ ಆ ದಿನ ಮನಸ್ಸಿನಲ್ಲಿ ಮರುಕಳಿಸಿ ಮುಖದಲ್ಲಿ ಒಂದು ಮುಗುಳುನಗೆ ಬೀರಿದೆ. ಮನಸ್ಸಿಗೆ ಖುಷಿಯಾಗಲು ಈ ರೀತಿಯ ಸಣ್ಣ ಪುಟ್ಟ ವಿಷಯಗಳು ಕಾರಣವಾಗುತ್ತದೆ. ನೆನಪುಗಳು ಎಷ್ಟು ಬೇಗ ಕಣ್ಣೆದುರು ಬಂದು ಮನಸ್ಸಿಗೆ ಹಿತ ನೀಡುತ್ತದೆ. ಮನಸ್ಸಿಗೆ ಹಿತ ಕೊಡುವ ಈ ನೆನಪುಗಳು ಎಷ್ಟು ಸುಂದರ ಹಾಗು ಅಚ್ಚರಿ ಅಲ್ಲವೇ?. ಪ್ರಕೃತಿಯ ಈ ವಿಸ್ಮಯಗಳಿಗೆ ನಾನೆಂದಿಗು ಚಿರಋಣಿ ಎಂದು ಹೇಳುತ್ತಾ ವಾಹನ ಚಲಾಯಿಸುತ್ತಾ ಹೊರಟೆ.
ಕೃಷ್ಣಮೂರ್ತಿ. ಕೆ.
Categories Short StoriesTags , ,

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

search previous next tag category expand menu location phone mail time cart zoom edit close