ಬೆಂದು-ಕಾದೋರು

ಬೆಂದ-ಕಾಳೂರಿನ ಮುಂದಿನ ಭಾಗ
ನನ್ನ ಹೆಸರಿಗೆ ತಕ್ಕಂತೆ ಜನರ ನಡುವೆ ಬೆಂದುಹೋಗಿರುವೆ. ಜನರ ಆಸೆ ಆಕಾಂಕ್ಷೆಗಳಿಗೆ ಬಲಿಯಾಗಿರುವೆ, ನೊಂದು ಬಂದ ಜೀವಿಗೆ ಆಸರೆಯಾಗಿ ನನ್ನ ಅಸ್ತಿತ್ವವನ್ನೆ ಕಳೆದುಕೊಂಡಿರುವೆ. ಹೌದು ಹೆಸರಿಗೆ ತಕ್ಕಂತೆ ಬೆಂದು ಹೋಗಿರುವೆ, ಬೆಂದಕಾಳೂರು ಎಂದೆ ಪ್ರಸಿದ್ಧವಾಗಿರುವೆ.
ದೇಶದ ಪ್ರಸಿದ್ಧ ಹಾಗು ಇತಿಹಾಸ ಹೊಂದಿರುವ ನಗರಗಳಲ್ಲಿ ನಾನು ಒಬ್ಬ. ರಾಜರ ಆಳ್ವಿಕೆಯಲ್ಲಿ ನನ್ನ ನಗರ ಅಮೋಘ ಮತ್ತು ಆಕರ್ಷಣೀಯವಾದ ಕೇಂದ್ರ ಬಿಂದುವಾಗಿತ್ತು. ಎಷ್ಟೊ ರಾಜರ ಹೃದಯ ಮುಟ್ಟುವಂತಹ ನೆಲೆನಾಡಾಗಿದ್ದೆ. ಕೆಂಪೇಗೌಡರೆ ಮೆಚ್ಚುವಂತಹ ಹಾಗು ಪ್ರಸಿದ್ಧಗೊಳಿಸಿದಂತ ನಾಡಾಗಿದ್ದೆ. ಅಯ್ಯೋ ಬಿಡಿ ಅದೊಂದು ಕಥೆ ಕಥೆಯಾಗಿಯೆ ಉಳಿಯಿತು. ಆ ದಿನಗಳನ್ನು ನೆನೆಸಿಕೊಂಡರೆ ನೆನಪುಗಳಲ್ಲೆ ಮುಳುಗಿಹೋಗುತ್ತೇನೆ.
ಆದರೆ ಈಗ ನನ್ನ ಇರುವಿಕೆ ಬಹಳ ಮುಖ್ಯವಾದರು ಉಳಿಸಿಕೊಳ್ಳುವ ಮನಸ್ಸು ಬಹಳ ಕಡಿಮೆ. ನನ್ನನು ನಂಬಿ ಬಂದವರಿಗೆ ಎಂದು ಮೋಸ ಮಾಡಿಲ್ಲ ಆದರು ಬಂದ ಜನ ನನ್ನನು ಕೊಂದು ಹಾಕುವ ಯೋಚನೆ ಬಿಡುವುದಿಲ್ಲ. ಯಾಕೆ ಈ ರೀತಿ ಮಾತನಾಡುತ್ತಿದ್ದೇನೆ ಎಂದು ಅಚ್ಚರಿಯಾಗಿರಬೇಕಲ್ಲ. ಹೌದು, ನನ್ನ ಹೆಸರು ಬೆಂಗಳೂರು ಎಂದು ಬದಲಾದಾಗಲಿಂದ ಜನರು ನನ್ನನು ಆಲಿಸಿ ಬರಲು ಹೆಚ್ಚಾದರು. ಸುರಕ್ಷಿತವಾದ ಜಾಗ, ಅತ್ಯುತ್ತಮ ವಾತಾವರಣ, ಒಳ್ಳೆಯ ಗಾಳಿ ಎಲ್ಲ ಸೇರಿ ಮೈ ನವಿರೇಳಿಸುವ ತಾಣವಾಗಿದೆ ಹಾಗಾಗಿ ಜನ ಇಷ್ಟ ಪಟ್ಟು ನನ್ನಲ್ಲಿಗೆ ಬರುತ್ತಾರೆ. ದೇಶದ ಯಾವುದೇ ಮೂಲೆಯಿಂದ ಬಂದರು ಅವರಿಗೊಂದು ನೆಲೆ ಹಾಗು ಜೀವನಕ್ಕೊಂದು ದುಡಿಮೆಯ ದಾರಿ ಮಾಡಿಕೊಡುತ್ತೇನೆ.
ಬಹುಶಹ ನನ್ನ ಅಳಿವಿಗೆ ಕಾರಣ ಇದು ಕೂಡ ಇರಬಹುದು. “ಅಳಿವು” ಯಾಕೆ ಈ ಪದ ಬಳಸಿದೆ ಎಂದು ಯೋಚನೆ ಶುರುವಾಗಿರಬೇಕ್ಕಲ್ಲ??. ಹೌದು ಅಳಿವು ನನ್ನ ಪಾಲಿಗೆ ತುಂಬ ಸಮೀಪದಲ್ಲಿದೆ. ಜನರು ನನ್ನನು ಎಷ್ಟು ಉಪಯೋಗಿಸಿಕೊಳ್ಳಬೇಕೊ ಅದಕ್ಕಿಂತ ಹೆಚ್ಚಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಆದರು ಇಷ್ಟು ದಿನ ಸುಮ್ಮನಿದ್ದರು ನನ್ನನು ಮೂಖನೆಂದುಕೊಂಡಿದ್ದಾರೆ. ಐಟಿ, ಬೀಟಿ, ಸಾಫ್ಟ್ ವೇರ್ ಕಂಪನಿ, ಟೆಕ್ಪಾರ್ಕ, ಇಂಡಸ್ಟ್ರೀಸ್ ಅಂತ ಎಷ್ಟೋ ರೀತಿಯ ವಿಭಿನ್ನ ಮುಖಗಳು ನನ್ನ ಮಡಿಲಲ್ಲಿ ಮಲಗಿವೆ. ಯಾವುದಕ್ಕು ಇಲ್ಲ ಎಂದವನಲ್ಲ ಆದರೆ ನಾನು ಇಲ್ಲ ಎಂದು ಹೇಳುವುದಕ್ಕು ಒಂದು ಕಾರಣವಿದೆ ಅದು ನನ್ನ ಒಳ್ಳೆಯ ಮನಸ್ಸು ಆ ಮನಸ್ಸನ್ನು ದುರುಪಯೋಗ ಪಡಿಸಿಕೊಳ್ಳುವರು ಹೆಚ್ಚಾಗಿದ್ದಾರೆ.
ಕುಡಿಯಲು ನೀರು ಬೇಕು ಹಾಗಾಗಿ ನನ್ನ ಮೈ ಒಳಗೆ ಸೂಜಿ ಚುಚ್ಚುವಂತೆ ಬೋರ್ವೆಲ್ ಕೊರೆದು ನೀರು ತೆಗೆಯುತ್ತಾರೆ. ಪ್ರಯಾಣದ ಪ್ರಮಾಣ ಹೆಚ್ಚಾಗಿ ಟ್ರಾಫಿಕ್ ಜಾಮ್ ಅಂತ ಗೋಗರೆದು ಮೆಟ್ರೋ ಮಾರ್ಗ ಹಿಡಿಯುತ್ತಿದ್ದಾರೆ. ಅದಕ್ಕು ಸರಿ ಎಂದು ತಲೆ ಬಾಗಿದೆ. ಆದರೆ ನನ್ನ ಅಸ್ತಿಯನ್ನೆ ಮುರಿದು ನನ್ನ ಹೃದಯ ಭಾಗವನ್ನೇ ಕೊರೆದು ಮೆಜೆಸ್ಟಿಕ್ ಅಂಡರ್ ಪಾಸ್ ಮೆಟ್ರೋ ಸ್ಟೇಷನ್ ಮಾಡಿದ್ದಾರೆ. ಉಸಿರಾಟಕ್ಕಿದ್ದ ಮರ ಗಿಡಗಳನ್ನು ಕಡಿದು ನನ್ನನು ಅಭಿವೃದ್ಧಿ ಪಡಿಸಲು ಹೊರಟ್ಟಿದ್ದಾರೆ. ಅಭಿವೃದ್ಧಿಯ ನೆಪದಲ್ಲಿ ನನ್ನ ನರ ನಾಡಿಯಾಗಿದ್ದ ರಾಜ ಕಾಲುವೆಯನ್ನು ಮುಚ್ಚಿಹಾಕ್ಕಿದ್ದಾರೆ. ನನ್ನ ನೋವಿನ ಕಣ್ಣೀರು ಕೆರೆ ಕಟ್ಟೆಗಳಾಗಿದ್ದವು, ಆದರೆ ಅದನ್ನು ಮುಚ್ಚಿ ಅಪಾರ್ಟ್ಮೆಂಟ್ ಹೆಸರಲ್ಲಿ ಎತ್ತರದ ಬಹು ಮನೆಗಳನ್ನು ನಿರ್ಮಿಸಿ ನನ್ನ ಕಣ್ಣೀರು ಕೂಡ ಬತ್ತಿ ಹೋಗುವಂತೆ ಮಾಡಿದ್ದಾರೆ. ಆದರು ನನ್ನ ಮಡಿಲಿನ ಮಕ್ಕಳೆಂದು ನಾನು ಸುಮ್ಮನಿದ್ದೆ. ಚಳಿಯಾದಾಗ ಬಿಸಿಲು ತರುತ್ತಿದ್ದೆ, ಬಿಸಿಲೆಂದಾಗ ಮಳೆ ತರುತ್ತಿದ, ಇದು ಜನರಿಗೆ ಅಭ್ಯಾಸವಾಗಿ ಹೋಯಿತು.
ನನ್ನ ತಾಳ್ಮೆಯ ಪರೀಕ್ಷೆ ಮುಗಿದಿದೆ, ನನ್ನ ಕೋಪ ಯಾರಿಂದಲು ಊಹಿಸಲು ಸಾಧ್ಯವಿಲ್ಲ. ಅಗತ್ಯಕ್ಕಿಂತ ಹೆಚ್ಚು ಮಳೆ ತಂದು ಮುಳುಗಿಸುವ ಶಕ್ತಿ ನನಗಿದೆ ಎಂದು ನಿಮಗೆ ಅರಿವು ಮೂಡಿಸಿರುವೆ. ಇದು ಎಚ್ಚರಿಕೆಯ ಸೂಚನೆ. ಇನ್ನು ಅರ್ಥಮಾಡಿಕೊಳ್ಳದೆ ಹೋದರೆ ನನ್ನ ಕೋಪಕ್ಕೆ ಬಲಿಯಾಗುತ್ತೀರ ಹುಷಾರ್!. ಉಸಿರಾಡುವ ಗಾಳಿಯಲ್ಲು ವಿಷವಿದೆ. ರಸ್ತೆಗಳಲ್ಲಿ ಆಗಿರುವ ಗುಂಡಿಗಳು ನಿಮ್ಮ ಜೀವಕ್ಕೆ ಕಂಟಕವಾಗಿದೆ. ಇನ್ನು ಎಚ್ಚೆತ್ತುಕೊಳ್ಳದಿದ್ದರೆ ನಿಮ್ಮ ಸಾವಿಗೆ ನೀವೇ ಕಾರಣರು. ನನ್ನನು ದೂಷಿಸುವ ಸಮಯ ಮುಗಿದಿದೆ, ನಿಮ್ಮನ್ನು ನೀವು ಉಳಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಇನ್ನು ಮಿತಿ ಮೀರಿದರೆ ಬೆಂದಕಾಳೂರು ಎಂಬ ಹೆಸರು ಬೆಂದು-ಕಾದೋರು ಎಂದು ಬದಲಾಗುತ್ತದೆ. ನನ್ನನು ಉಳಿಸಿಕೊಂಡರೆ ನಿಮಗೆ ಉಳಿಗಾಲ. ತಿಳಿದಿರಲಿ!. ಈ ಎಚ್ಚರಿಕೆಯ ಸೂಚನೆ ಬದಲಾವಣೆಗೆ ದಾರಿಯಾಗಬೇಕು.
ಕೃಷ್ಣಮೂರ್ತಿ. ಕೆ.
Categories TrendingTags , ,

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

search previous next tag category expand menu location phone mail time cart zoom edit close