“ಯುವ”ಕನ-ಸು

ಹೇ ಬದುಕೆ ಬೇಸರು ಬೇಡ ನಿನಗೆ
ಬರುವೆನು ನಿನ್ನೆಡೆಗೆ ಧೃಡ ಸಂಕಲ್ಪದೊಂದಿಗೆ

 

ದೇಶ ಹೋಗುತಿದೆ ದಾರಿ ತಪ್ಪಿ
ನೀ ಹಿಡಿಯಬೇಕಿದೆ ಬಿಗಿದಪ್ಪಿ
ಹೇ ಮನುಜ ನೀ ಹಚ್ಚಬೇಕಿದೆ ದೇಶದ ದೀಪವ
ನೀನೆ ಮಲಗಿದರೆ ಯಾರೊ ದಿಕ್ಕು ಹೇಳೊ ಮಾನವ

 

ರಾಜಕೀಯದ ಆಟದಲ್ಲಿ ಹಂಚಿತಿನ್ನುತ್ತಿದೆ ಸ್ವಾರ್ಥ ರಣ ಹದ್ದುಗಳು ಇಂದು
ಜೀವ ಹೋದರು ಮಿಡಿಯುತಿದೆ ಹೃದಯ ದೇಶದ ಒಳಿತಿಗೆಂದು
ಅರಳಬೇಕಾದ ಹೂಗಳು ಮೂಲೆ ಸೇರಿದೆ
ಅರ್ಥವಿಲ್ಲದ ಪಾತ್ರವು ಕಾಂಚಣದಿ ಕುಣಿಯುತ್ತಿದೆ

 

ಕೆಕ್ಕರಿಸಿ ನೋಡುವ ಕಟ್ಟ ಕಣ್ಣುಗಳಿಗೆ ಆಗಬೇಕಿದೆ ಮರಣ
ಆಗಲೆ ಆಗುವುದು ಹೊಸ ದೇಶದ ರೂಪ ನಿರ್ಮಾಣ
ಕಂಡು ಕಾಣದಂತಿರುವ ಅಪ್ರತಿಮ ಯುವ ತರುಣ
ನೀನೆ ಬರೆಯಬೇಕು ದೇಶದ ಐತಿಹಾಸಿಕ ಶಾಸನ

 

ದೇಶಕ್ಕಾಗಿ ದುಡಿಯುವ ಮನದಿಚ್ಚೆ ಬೆಳೆಸಿಕೊ
ದಿಟ್ಟ ಹೆಜ್ಜೆ ಇಟ್ಟು, ಪಣ ತೊಟ್ಟು ನಿನ್ನ ನೆಲ ಉಳಿಸಿಕೊ
ಮನಕೆಡಿಸುವ ವಿಷಯಗಳ ಕಿತ್ತೊಗೆಯಬೇಕು
ಸಾಧನೆಗಾಗಿ ಹುಟ್ಟುವ ಕಿಚ್ಚು ಕಣ್ಣಲ್ಲಿ ಕಾಣಬೇಕು

 

ದೇಹ ಬಲ, ಮನೊ ಬಲ, ಆತ್ಮ ಬಲ ನಿನ್ನಲ್ಲಿರುವುದು ಅಸ್ತ್ರಗಳಾಗಿ
ಈ ಅಸ್ತ್ರಗಳ ಬಳಸಿ ಕಟ್ಟಬಹುದು ದೇಶವ ಸುಸೂತ್ರವಾಗಿ
ತಾಯಿ, ತಾಯ್ನಾಡಿಗಾಗಿ ಋಣ ತೀರಿಸುವ ಜವಾಬ್ದಾರಿ ನಿನ್ನಲ್ಲಿದೆ
ಆ ಜವಾಬ್ದಾರಿ ತೀರಿಸಿಕೊಳ್ಳುವ ಸಮಯ ಈಗ ಕೈಗೂಡಿದೆ

 

ನಿನ್ನದೆ ದೊಡ್ಡ ಕಷ್ಟಗಳೆಂದು ಎಂದು ಭಾವಿಸಬೇಡ
ಇನ್ನೊಬ್ಬರ ಕಷ್ಟದ ಮುಂದೆ ನಿನ್ನ ನೊವು ಚಿಕ್ಕದೆಂದು ಮರೆಯಬೇಡ
ಸೂರ್ಯ ಒಬ್ಬಂಟಿಗನಾಗಿದ್ದರೂ, ತಾನೇ ಉರಿದರು
ಇಡೀ ಸೌರಮಂಡಲಕ್ಕೆ ಹಂಚುವನು ಬೆಳಕು
ಆ ಸೂರ್ಯ ನೀನಾಗಿ ತೊರಿಸು ಇನ್ನೊಂದು ಜೀವಿಗೆ ಬೆಳಕು
ತಾನೆ ತಾನಾಗಿ ಸುಂದರತೆಗೆ ಸಾಕ್ಷಿಯಾಗಿ ಅರಳುವುದು ನಿನ್ನ ಬದುಕು

 

ದೇಶಕ್ಕಾಗಿ ಬದುಕುವ ಮನಸ್ಸು ನಿನ್ನದಾಗಿರಲಿ
ಬಯಸಿದ್ದೆಲ್ಲಾ ಬರುವುದು ನಿನಗೆ ಸಾಧನೆಯ ರೂಪದಲ್ಲಿ
ಚಂಚಲ ಮನಸ್ಸಿನ ನವ ಯುವಕರೆ
ನಿಮ್ಮ ಚಂಚಲತೆ ಇರಲಿ ನಾಡು, ನುಡಿ, ಸಂಸ್ಕೃತಿ, ಸಂಸ್ಕಾರದ ಕಡೆ

 

ಎದ್ದೇಳೊ ಮನುಜ
ರಾಜನಂತೆ ದೇಶ ಮುನ್ನಡೆಸು
ಪ್ರಗತಿಯತ್ತ ದಾರಿ ಬದಲಿಸು
ಉತ್ತುಂಗಕ್ಕೆರುವ ಕನಸು ನನಸಾಗಿಸು

 

ಹೇ ಬದುಕೆ ಬೇಸರ ಬೇಡ ನಿನಗೆ
ಬರುತಿರುವೆನು ನಿನ್ನೆಡೆಗೆ ಧೃಡ ಸಂಕಲ್ಪದೊಂದಿಗೆ
– ಕೃಷ್ಣಮೂರ್ತಿ. ಕೆ.
Categories PoemsTags , , ,

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

search previous next tag category expand menu location phone mail time cart zoom edit close