ಹೆಣ್ಣೆಂದರೆ ನೀ

ನಿನಗಾಗಿ ಬರೆದಿರುವೆ ಒಂದು ಕವಿತೆ ಕೇಳೇ ಓ ಗೆಳತಿ.

 

ಕಣ್ಣಲ್ಲಿ ಅಡಗಿರುವ ಕನಸುಗಳ ತಾರೆ ನೀ.

ಕಣ್ತುಂಬಿದಾಗ ಒರೆಸುವ ತಾಯಿಯ ಗುಣದವಳು ನೀ.

ಕತ್ತಲ ಕನ್ನಡಿಯಲ್ಲಿ ಬೆಳಕು ಮೂಡಿಸಿದವಳು ನೀ.

ಕಡಲ ತೀರದಲ್ಲಿ ಸಿಕ್ಕ ಮುತ್ತಿನ ಸ್ವಪ್ನ ನೀ.

 

ಬಾಡಿಹೋದ ಈ ಮನಸ್ಸಿನಲ್ಲಿ ಕನಸಿನ ಚಿಗುರು ತಂದವಳು ನೀ.

ಕನಸಿನ ಕಣ್ಣಲ್ಲಿ ಗುಡಿಯ ಗೋಪುರವಾದೆ ನೀ.

ಈ ಜಗದ ಹೆಣ್ಣೆಂಬ ಭಾವಕ್ಕೆ ಗೌರವ ತಂದವಳು ನೀ‌.

ಗೌರವದ ಜೊತೆ ಕರುಣೆಯ ಸಾಗರ ತೊರಿದವಳು ನೀ.

 

ನಿನ್ನಂತಹ ಹೆಣ್ಣಲ್ಲಿ ಕಂಡೆ ಆ ದೇವತೆಯ ರೂಪ.

ದೇವತೆಯಾಗೆ ಹೊತ್ತು ತಂದೆ ಆ ಹೆಣ್ಣಿನ ಸ್ವರೂಪ.

ಕಣ್ಣೊಟಗಳಲ್ಲಿ ಬಂದ ಆ ಕೆಲವು ಸಂದೇಶಗಳು

ಮನಸ್ಸಿನ ಆಳಕ್ಕೆ ನಾಟಿ ಸೃಷ್ಟಿಸಿವೆ ಹೊಸ ಸಂಗೀತಗಳು.

 

ಹೆಣ್ಣಿನ ನಿಜ ಧರ್ಮ ಕನಸು ಎಂದಿದ್ದೆ.

ಕನಸು ನನಸಾದಾಗ ಸೃಷ್ಟಿಯೆ ಅದ್ಭುತವೆನಿಸಿದೆ.

ಆ ನಿನ್ನ ಗುಣಕ್ಕೆ ನಾ ತಲೆಬಾಗುವೆ ಗೌರವಿಸುವೆ.

ಗುಣಗಳ ಹೊಂದಿರುವ ನೀ ಜಗದ ವಿಸ್ಮಯವೆ ಸರಿ.

 

ಬಾಳದಾರಿಯಲ್ಲಿ ಬಯಸದಿರುವ ಭಾಗ್ಯದ ಬಾಗಿಲು ಬಡಿದಿದೆ.

ಬಾಗಿಲು ತೆರೆದು ನೋಡಿದಾಗ ನಿನ್ನ ಪ್ರತಿಬಿಂಬ ಮೂಡದೆ.

ಮನಸ್ಸಲ್ಲಿ ಕೊಂಚ ಚಂಚಲತೆಯ ಆಟ.

ಆ ಆಟಕ್ಕೆ ಕಲಿಸಿಕೊಡು ಒಂದು ಪಾಠ.

 

ಭಾವನೆಗಳ ಒಡಲಲ್ಲಿ ತುಂಬಿ ಬಂದಿದೆ ಒಲವು.

ಆ ಒಲವಿಗೆ ಆಸರೆಯಾಗಿ ದಯಮಾಡಿ ನೀಡು ಗೆಲುವು.

ಮನದ ಮುಗಿಲಲ್ಲಿ ತೆರೆದು ನಿಂತಿರುವೆ ಬಾಗಿಲ.

ಆ ಬಾಗಿಲ ತುಂಬಿ ಬರುವೆಯಾ ನನ್ನ ಹೃದಯ ಚಂಚಲ.

 

-ಕೃಷ್ಣಮೂರ್ತಿ. ಕೆ

Categories PoemsTags , ,

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

search previous next tag category expand menu location phone mail time cart zoom edit close