ರಾಕ್ಷಸಿ

ನೀ ಒಬ್ಬ ರಾಕ್ಷಸಿ
ನನ್ನ ಮದವ ಮುರಿದ ರಾಕ್ಷಸಿ
ಕೋಪವ ಕೊಂದ ರಾಕ್ಷಸಿ

 

ದಿಟ್ಟ ನೋಟದಲ್ಲಿ ದ್ವೇಷ ಕೊಂದವಳು
ಅದೇ ನೋಟದಲ್ಲಿ ಸ್ನೇಹ ತಂದವಳು
ಜಡೆಯ ಜಲಪಾತದಲ್ಲಿ ಆಕ್ರೋಶ ಹರಿದವಳು
ದೂರದ ಸಮುದ್ರ ತಲುಪಿಸಿ ಪ್ರಶಾಂತತೆ ಮೆರೆದವಳು

 

ಕಲ್ಲನ್ನು ಕೆತ್ತಿದ ರಾಕ್ಷಸಿ
ಕಲ್ಲಿನ ಮನಸ್ಸನ್ನು ಕರಗಿಸಿದ ರಾಕ್ಷಸಿ

 

ಹಠವನ್ನು ಹತೋಟಿಗೆ ತಂದವಳು
ಹರುಷವನ್ನು ಹಿತವಾಗಿ ಬಳಸಿದಳು.
ಆವೇಶವನ್ನು ಹಿಡಿದವಳು
ಹಿಡಿದು ತುಳಿದು ಸಂಹಾರ ಮಾಡಿದಳು.

 

ನನ್ನ ಅಹಂ ಅರಗಿಸಿದ ರಾಕ್ಷಸಿ
ಕೊಳಕು ಯೋಚನೆಯನ್ನು ಸ್ವಚ್ಚ ಮಾಡಿದ ರಾಕ್ಷಸಿ

 

ಅತಿಆಸೆಯ ರುಂಡವನ್ನು ಕಡಿದವಳು.
ಕೈಯಲ್ಲಿ ಹಿಡಿದು ಮಾದರಿಯಾದಳು.
ದಾರಿತಪ್ಪಿದಾಗ ಹಿಡಿದು ತರಲು
ಅಸ್ತ್ರಗಳ ಜೊತೆ ಸಿದ್ದಳಾದಳು.

 

ರೌದ್ರ ತಾಂಡವ ತೋರಿದ ರಾಕ್ಷಸಿ
ದೇವತೆಯ ರೂಪದಲ್ಲಿ ಬಂದ ರಾಕ್ಷಸಿ
ದೇವತೆಯಾಗೆ ನಿಂತ ರಾಕ್ಷಸಿ
ದೇವರಾಗೆ ಬಿಟ್ಟಳು ಈ ರಾಕ್ಷಸಿ.

 

ನೀ ಒಬ್ಬ ರಾಕ್ಷಸಿ
ನನ್ನ ಮದವ ಮುರಿದ ರಾಕ್ಷಸಿ
ಕೋಪವ ಕೊಂದ ರಾಕ್ಷಸಿ

 

– ಕೃಷ್ಣಮೂರ್ತಿ. ಕೆ
Categories PoemsTags , , ,

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

search previous next tag category expand menu location phone mail time cart zoom edit close